ಆದಿಶಕ್ತಿ ಹಾಗೂ ಹೊಂಬೆಳಕು ಮಹಿಳಾ ಸ್ವಸಹಾಯ ಸಂಘಕ್ಕೆ ಸಾಲದ ಚೆಕ್ ವಿತರಣೆ

ನಗರದ ದಟ್ಟಗಳ್ಳಿಯಲ್ಲಿ ಆದಿಶಕ್ತಿ ಮಹಿಳಾ ಸ್ವಸಹಾಯ ಸಂಘ, ಹೊಂಬೆಳಕು ಮಹಿಳಾ ಸ್ವಸಹಾಯ ಸಂಘ, ಆಸರೆ ಮಹಿಳಾ ಸ್ವಸಹಾಯ ಸಂಘವನ್ನು ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (ಎಂಸಿಡಿಸಿಸಿ) ದ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಅವರು ಉದ್ಘಾಟಿಸಿದರು. ಬಳಿಕ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳೆಯರಿಗೆ ಸಾಲದ ಚೆಕ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ.ಜನಾರ್ಧನ್, ಪ್ರಧಾನ ವ್ಯವಸ್ಥಾಪಕರು ಶಶಿಧರ್ ಇತರರು [...]

ಉತ್ತಮ ಕಾರ್ಯನಿರ್ವಹಣೆ ಗೆ ಅಪೆಕ್ಸ್ ಬ್ಯಾಂಕ್ ನಿಂದ ಪ್ರಶಸ್ತಿ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತಕ್ಕೆ (ಎಂಸಿಡಿಸಿಸಿ) ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ನಿಂದ ‘ಬಿ ವಿಭಾಗ’ದಲ್ಲಿ ‘ಉತ್ತಮ ಕಾರ್ಯನಿರ್ವಹಣೆ’ ನೀಡಿದ ಬ್ಯಾಂಕ್ ಎಂಬ ಪ್ರಶಸ್ತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಇಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತದ ಉಪಾಧ್ಯಕ್ಷರು ಆದ ಜಿ.ಡಿ.ಹರೀಶ್ ಗೌಡ ಹಾಗೂ ಎಂಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಜೆ.ಸಿ.ಜನಾರ್ಧನ್ ಅವರು ಪ್ರಶಸ್ತಿ ಸ್ವೀಕರಿಸಿ ಗೌರವಕ್ಕೆ ಪಾತ್ರರಾದರು.ಬೆಂಗಳೂರಿನ ಅಪೆಕ್ಸ್ […]

ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಎಂ.ಸಿ.ಡಿ.ಸಿ. ಸಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.

ಮೈಕ್ರೋ ATMಗಳ ಅನಾವರಣ

ಇಂದು ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ ಡಿ ಹರೀಶ್ ಗೌಡ ರವರು ಮೈಕ್ರೋ ATMಗಳ ಅನಾವರಣ ಮಾಡಿದರು . ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಸಿ ಜನಾರ್ಧನ್, ನಿರ್ದೇಶಕರು, ಅಧಿಕಾರಿವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆ 2021

ಇಂದು ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ ಡಿ ಹರೀಶ್ ಗೌಡ್ರು ಧ್ವಜಾರೋಹಣ ಮಾಡುವ ಮುಖಾಂತರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಸಿ ಜನಾರ್ಧನ್, ಮಂಜು ಗೌಡ್ರು ಹಾಗೂ ಅಧಿಕಾರಿವರ್ಗದವರು-ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹೆಬ್ಬಾಳ ಶಾಖೆಯ ವತಿಯಿಂದ 6 ಲಕ್ಷ ರೂಪಾಯಿಗಳ ವಾಹನ ಸಾಲ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಹೆಬ್ಬಾಳ ಶಾಖೆಯ ವತಿಯಿಂದ 6 ಲಕ್ಷ ರೂಪಾಯಿಗಳ ವಾಹನ ಸಾಲದಲ್ಲಿ ನೀಡಲಾದ ಕ್ಯಾಂಟರ್ ವಾಹನದ ಕೀ ಅನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ. ಹರೀಶ್ ಗೌಡ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.  

ರೈತರಿಗೆ ಸಾಲ ಹಾಗೂ ಟ್ರ್ಯಾಕ್ಟರ್ ವಿತರಣೆ

ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ 'ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್' ಹಾಗೂ 'ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ'ಗಳ ಸಹಯೋಗದೊಂದಿಗೆ ನಮ್ಮ ಬ್ಯಾಂಕಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ.ಡಿ. ಹರೀಶ್ ಗೌಡ ಅವರು ರೈತರಿಗೆ ಸಾಲ ಹಾಗೂ ಟ್ರ್ಯಾಕ್ಟರ್ ವಿತರಿಸಿದರು. ಈ ವೇಳೆ ಬ್ಯಾಂಕಿನ ಉಪಾಧ್ಯಕ್ಷರಾದ ಬಿ. ಎನ್. ಸದಾನಂದ, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.  

ನಮ್ಮ ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬೆಳ್ಳಿ ಪ್ರಕಾಶ್ ಭೇಟಿ

ಇಂದು ನಮ್ಮ ಪ್ರಧಾನ ಕಚೇರಿಗೆ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬೆಳ್ಳಿ ಪ್ರಕಾಶ್ ರವರು ಭೇಟಿ ನೀಡಿದ ಸಂದರ್ಭ.

ರೈತ ಸ್ಪಂದನ ಕಾರ್ಯಕ್ರಮ

ನಮ್ಮ ಬ್ಯಾಂಕಿನ ವತಿಯಿಂದ ಇಂದು ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ‘ರೈತ ಸ್ಪಂದನ’ ಕಾರ್ಯಕ್ರಮವನ್ನು ಮಾನ್ಯ ಉಸ್ತುವಾರಿ ಸಚಿವ ಹಾಗೂ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರು ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ ಹರೀಶ್ ಗೌಡ ಹಾಗೂ ಮೈಮುಲ್ ಅಧ್ಯಕ್ಷರಾದ ಪ್ರಸನ್ನ ಅವರ ಜೊತೆಗೂಡಿ ಉದ್ಘಾಟಿಸಿದರು.

ಹೆಬ್ಬಾಳದಲ್ಲಿ ನೂತನ ಶಾಖಾ ಕಟ್ಟಡ ಉದ್ಘಾಟನೆ

'ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ' ದ ನೂತನ ಶಾಖೆಯನ್ನು ಇಂದು ಹೆಬ್ಬಾಳ್ ದಲ್ಲಿ ಆರಂಭಿಸಲಾಗಿದ್ದು, ಈ ನೂತನ ಶಾಖಾ ಕಟ್ಟಡವನ್ನು ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್. ಟಿ. ಸೋಮಶೇಖರ್ ಅವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ. ಡಿ. ಹರೀಶ್ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜನಾರ್ಧನ್, ನಿರ್ದೇಶಕರುಗಳು ಹಾಗೂ ಬ್ಯಾಂಕಿನ ಸಿಬ್ಬಂದಿ [...]