2020-21ನೇ ಸಾಲಿನ ‘ಸಹಕಾರ ಶಿಕ್ಷಣ ನಿಧಿ’ಯ ಚೆಕ್ ವಿತರಣೆ

2020-21ನೇ ಸಾಲಿನ ‘ಸಹಕಾರ ಶಿಕ್ಷಣ ನಿಧಿ’ಯ ಒಟ್ಟು 6,05,686 ರೂಪಾಯಿ ಮೌಲ್ಯದ ಚೆಕ್ ಅನ್ನು ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ. ಡಿ. ಹರೀಶ್ ಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ. ಸಿ. ಜನಾರ್ಧನ್ ಅವರು ಪಾವತಿಸಿದರು.

ಬ್ಯಾಂಕ್ ನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

ನಮ್ಮ ಬ್ಯಾಂಕ್ ನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಗುಂಡ್ಲುಪೇಟೆ ನಿರ್ದೇಶಕರಾದ ಶ್ರೀ ಎಂ.ಪಿ.ಸುನಿಲ್ ಅವರನ್ನು ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ಸದಾನಂದ, ಶ್ರೀ ಚಿಕ್ಕಳ್ಳಿ ಕುಮಾರ್, ಶ್ರೀ ಸಿಂಧುವಳ್ಳಿ ಕೆಂಪಣ್ಣ, ಶ್ರೀ ಕುರಹಟ್ಟಿ ಮಹೇಶ್, ಶ್ರೀ ಎಚ್.ಸುಬ್ಬಯ್ಯ, ಶ್ರೀ ಸಿ.ಎನ್.ರವಿ, ಶ್ರೀ ನಾಗೇಂದ್ರ ಕುಮಾರ್, ಶ್ರೀ ಎಚ್.ಜೆ.ನಾಗೇಂದ್ರ ಪ್ರಸಾದ್, ಶ್ರೀ ಶಿವರಾಜ್, ಶ್ರೀ ಜಯರಾಮ್, ಶ್ರೀ ಪ್ರಭಾಕರ್, […]

ಪಿರಿಯಾಪಟ್ಟಣ ತಾಲೂಕಿನಲ್ಲಿ ನೂತನ ಎಂಸಿಡಿಸಿಸಿ ಬ್ಯಾಂಕ್ ಶಾಖೆಯ ಕಟ್ಟಡ ಕಾಮಗಾರಿ

ಇಂದು ಪಿರಿಯಾಪಟ್ಟಣ ತಾಲೂಕಿನಲ್ಲಿ ‘’ ನೂತನ ಎಂಸಿಡಿಸಿಸಿ ಬ್ಯಾಂಕ್ ಶಾಖೆ “ ಯ ಕಟ್ಟಡ ಕಾಮಗಾರಿಗೆ ಸಹಕಾರ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್ ಅವರ ಜೊತೆಗೂಡಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ಶಾಸಕರಾದ ಶ್ರೀ ಕೆ.ಮಹದೇವ್, ಮೈಮುಲ್ ನ ಅಧ್ಯಕ್ಷರಾದ ಪಿ.ಎಂ.ಪ್ರಸನ್ನ, ಎಂಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಸಿ.ಜನಾರ್ಧನ್, ಪ್ರಧಾನ ವ್ಯವಸ್ಥಾಪಕರಾದ ಶ್ರೀ ಶಶಿಧರ್, ಪಿರಿಯಾಪಟ್ಟಣ ಬ್ಯಾಂಕ್ [...]

ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತಕ್ಕೆ ಭೇಟಿ

ಇಂದು ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತಕ್ಕೆ ಭೇಟಿ ನೀಡಿ ಒಕ್ಕೂಟದ ಬ್ಯಾಂಕ್ ಖಾತೆಗಳಿಗಾಗಿ ಎಂಸಿಡಿಸಿಸಿ ಬ್ಯಾಂಕ್ ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಕುರಿತು ಎಂಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಒಕ್ಕೂಟದ ಅಧ್ಯಕ್ಷರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಸಿ.ಜನಾರ್ಧನ್, ಪ್ರಧಾನ ವ್ಯವಸ್ಥಾಪಕರಾದ ಶ್ರೀ ಶಶಿಧರ್, ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷರಾದ [...]

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಬ್ಯಾಂಕ್ ಶಾಖೆಗೆ ಭೇಟಿ

ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು “ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಎಂಸಿಡಿಸಿಸಿ ಬ್ಯಾಂಕ್ ಶಾಖೆ”ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಸಿ.ಜನಾರ್ಧನ್, ಪ್ರಧಾ‌ನ ವ್ಯವಸ್ಥಾಪಕರಾದ ಶ್ರೀ ಶಶಿಧರ್, ಸತೀಶ್, ರವಿ ಹಾಗೂ ಬ್ಯಾಂಕ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ದಿನದ ಧ್ವಜಾರೋಹಣ

ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. (ಎಂಸಿಡಿಸಿಸಿ) ದಲ್ಲಿ 73ನೇ "ಗಣರಾಜ್ಯೋತ್ಸವ ದಿನ"ವನ್ನು ಆಚರಿಸಲಾಯಿತು. ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಮಂಜೇಗೌಡ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಸಿ.ಜನಾರ್ಧನ್, ಪ್ರಧಾನ ವ್ಯವಸ್ಥಾಪಕರಾದ ಶ್ರೀ ಶಶಿಧರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.