ನಗರದ ದಟ್ಟಗಳ್ಳಿಯಲ್ಲಿ ಆದಿಶಕ್ತಿ ಮಹಿಳಾ ಸ್ವಸಹಾಯ ಸಂಘ, ಹೊಂಬೆಳಕು ಮಹಿಳಾ ಸ್ವಸಹಾಯ ಸಂಘ, ಆಸರೆ ಮಹಿಳಾ ಸ್ವಸಹಾಯ ಸಂಘವನ್ನು ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (ಎಂಸಿಡಿಸಿಸಿ) ದ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಅವರು ಉದ್ಘಾಟಿಸಿದರು.
ಬಳಿಕ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳೆಯರಿಗೆ ಸಾಲದ ಚೆಕ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ.ಜನಾರ್ಧನ್, ಪ್ರಧಾನ ವ್ಯವಸ್ಥಾಪಕರು ಶಶಿಧರ್ ಇತರರು ಉಪಸ್ಥಿತರಿದ್ದರು.