ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೋವಿಡ್-19ಅನ್ನು ತಡೆಗಟ್ಟಲು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ವತಿಯಿಂದ 8000 ಕಿಟ್ ವಿತರಣೆ ಮಾಡಲಾಯಿತು. ಪ್ರತಿ ಕಿಟ್ಟಿನಲ್ಲಿ ತಲಾ ಒಂದು N95 ಮಾಸ್ಕ್, ಒಂದು ಸಾನಿಟೈಸರ್, ಒಂದು ಸೋಪ್ ಇರುತ್ತದೆ.
5000 ಕಿಟ್’ಗಳನ್ನು ಮೈಸೂರಿನ ಭಾಗಕ್ಕೆ ಹಾಗೂ 3000 ಕಿಟ್’ಗಳನ್ನು ಚಾಮರಾಜನಗರ ಜಿಲ್ಲೆಗೆ ಹಂಚುವಂತೆ ಮಾನ್ಯ ಸಚಿವರಾದ ವಿ ಸೋಮಣ್ಣ ರವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.