ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ವತಿಯಿಂದ ಇಂದು ಚಾಮರಾಜನಗರ ಜಿಲ್ಲಾಡಳಿತಕ್ಕೆ 3000 ಮಾಸ್ಕ್, 3000 ಸ್ಯಾನಿಟೈಜರ್ ಹಾಗೂ 3000 ಸೋಪ್ ಒಳಗೊಂಡ ಮೆಡಿಕಲ್ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಆರ್. ನರೇಂದ್ರ, ನಿರ್ದೇಶಕರಾದ ನಾಗೇಂದ್ರ ಕುಮಾರ್,ಜನರಲ್ ಮ್ಯಾನೇಜರ್ ವಿನೋದ್ ಕುಮಾರ್, ಸಹಾಯಕ ಜನರಲ್ ಮ್ಯಾನೇಜರ್ ರವಿ, ಕೊಳ್ಳೇಗಾಲ ಬ್ಯಾಂಕ್ ಮ್ಯಾನೇಜರ್ ಪ್ರವೀಣ್, ಆರೋಗ್ಯಾಧಿಕಾರಿಗಳಾದ ಡಾ. ಗಣೇಶ್,ಡಾ. ಗೋಪಾಲ್,ಡಾ. ರಾಜ್,ಡಾ. ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.