ಚಾಮರಾಜನಗರ ಜಿಲ್ಲೆಯ ಕೆಂಪನಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ “ಕೆಂಪನಪುರ ಚಾಮರಾಜನಗರ ತಾಲೂಕು ಮತ್ತು ಜಿಲ್ಲಾ ಸಂಘ”ದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನ ಉಪಾಧ್ಯಕ್ಷರಾದ ಜಿ. ಡಿ. ಹರೀಶ್ ರವರು, ಎಂಸಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಶ್ರೀ ಬಿ. ಎನ್. ಸದಾನಂದ ರವರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀ ಜಿ. ಸಿ. ಜನಾರ್ಧನ್ ರವರು, ಎಂಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಬಿ. ಜಿ. ನಾಗೇಂದ್ರಕುಮಾರ್ ರವರು, ಕೆಂಪನಪುರ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ಶ್ರೀ ಕೆ. ಎಂ. ಶ್ರೀಕಂಠಸ್ವಾಮಿಯವರು, ಉಪಾಧ್ಯಕ್ಷರಾದ ಶ್ರೀ ಕುಮಾರಸ್ವಾಮಿ, ಕೆಂಪನಪುರ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರಾದ ಶ್ರೀ ಕೆ. ಎಂ. ಶಿವಶಂಕರ್ ಹಾಗೂ ಮುಖಂಡರು ಉಪಸ್ಥಿತರಿದ್ದರು.