2020-21ನೇ ಸಾಲಿನ ‘ಸಹಕಾರ ಶಿಕ್ಷಣ ನಿಧಿ’ಯ ಒಟ್ಟು 6,05,686 ರೂಪಾಯಿ ಮೌಲ್ಯದ ಚೆಕ್ ಅನ್ನು ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ. ಡಿ. ಹರೀಶ್ ಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ. ಸಿ. ಜನಾರ್ಧನ್ ಅವರು ಪಾವತಿಸಿದರು.
ನಮ್ಮ ಬ್ಯಾಂಕ್ ನ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಗುಂಡ್ಲುಪೇಟೆ ನಿರ್ದೇಶಕರಾದ ಶ್ರೀ ಎಂ.ಪಿ.ಸುನಿಲ್ ಅವರನ್ನು ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ ಸದಾನಂದ, ಶ್ರೀ ಚಿಕ್ಕಳ್ಳಿ ಕುಮಾರ್, ಶ್ರೀ ಸಿಂಧುವಳ್ಳಿ ಕೆಂಪಣ್ಣ, ಶ್ರೀ ಕುರಹಟ್ಟಿ ಮಹೇಶ್, ಶ್ರೀ ಎಚ್.ಸುಬ್ಬಯ್ಯ, ಶ್ರೀ ಸಿ.ಎನ್.ರವಿ, ಶ್ರೀ ನಾಗೇಂದ್ರ ಕುಮಾರ್, ಶ್ರೀ ಎಚ್.ಜೆ.ನಾಗೇಂದ್ರ ಪ್ರಸಾದ್, ಶ್ರೀ ಶಿವರಾಜ್, ಶ್ರೀ ಜಯರಾಮ್, ಶ್ರೀ ಪ್ರಭಾಕರ್, […]