ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳು ಹಾಗೂ ಸ್ವ ಸಹಾಯ ಗುಂಪುಗಳ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 3 ತಿಂಗಳ ವರೆಗೆ ವಿಸ್ತರಿಸಲು ಮನವಿ

ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ. ಡಿ ಹರೀಶ್ ಗೌಡ ಅವರು ಮಾನ್ಯ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿದರು. ಬ್ಯಾಂಕಿನಿಂದ 2020-21 ನೇ ಸಾಲಿನಲ್ಲಿ 80,368 ಜನ ರೈತರಿಗೆ ರೂ.74916.36 ಲಕ್ಷಗಳ ಕೆ.ಸಿ.ಸಿ. ಸಾಲ, 1129 ಜನ ರೈತರಿಗೆ ರೂ.2810.20 ಲಕ್ಷಗಳ ಮಧ್ಯಮಾವದಿ ಸಾಲ ಹಾಗೂ ಸ್ವ-ಸಹಾಯ ಗುಂಪುಗಳಿಗೆ [...]

ಕಾಯಕ ಯೋಜನೆ ಅಡಿಯಲ್ಲಿ ಲಿಂಕೇಜ್ ಸಾಲ ವಿತರಣೆ

ಜನತಾ ನಗರ ಶಾಖೆಯಿಂದ ಕಾಯಕ ಯೋಜನೆ ಅಡಿಯಲ್ಲಿ ಜನತಾನಗರ ಹಾಗೂ ದಟ್ಟಗಳ್ಳಿಯ ಸಿರಿ, ದೃಷ್ಟಿ ಮಹಿಳಾ ಸ್ವಸಹಾಯ ಸಂಘಕ್ಕೆ ತಲಾ 10 ಲಕ್ಷ ರೂ ಸಾಲ ವಿತರಣೆ ಹಾಗೂ ಚಾಮುಂಡೇಶ್ವರಿ ಧನಲಕ್ಷ್ಮಿ ಶ್ರೀ ಬಾಲಗಂಗಾಧರ ನಾಥಸ್ವಾಮಿ ಮಹಿಳಾ ಸ್ವಸಹಾಯಕ್ಕೆ ಒಟ್ಟು 7 ಲಕ್ಷ ರೂ ಲಿಂಕೇಜ್ ಸಾಲ ವಿತರಣೆಯನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ರಿಂದ ಚೆಕ್ ವಿತರಿಸಲಾಯಿತು.ಈ ವೇಳೆ ಬ್ಯಾಂಕಿನ ನಿರ್ದೇಶಕರಾದ ಎಂ ಪಿ ಸುನಿಲ್, ಮುಖ್ಯ [...]