ಡಿಜಿಟಲ್ ಹಣಕಾಸು ಸಾಕ್ಷರತಾ ಜಾಗ್ರತಿ ಕಾರ್ಯಕ್ರಮ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಬೆಂಗಳೂರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಮೈಸೂರು ವತಿಯಿಂದ ಸಾರ್ವಜನಿಕರಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರದ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ನಗರ ಶಾಖೆಯಲ್ಲಿ ಹಮ್ಮಿಕೊಂಡಿದ್ದ “ಡಿಜಿಟಲ್ ಹಣಕಾಸು ಸಾಕ್ಷರತಾ ಜಾಗೃತಿ ಕಾರ್ಯಕ್ರಮಕ್ಕೆ ಡಿ.ಡಿ.ಎಂ.ನಬಾರ್ಡ್ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಮಾನ್ಯ ಶ್ರೀ ಮಣಿಕಂಠನ್ ಅವರ ಜೊತೆಗೂಡಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ, ಎಂ. ಕುಮಾರ್ ಚಿಕ್ಕಹಳ್ಳಿ, ಡಾ: ಎಂ.ಬಿ.ಮಂಜೇಗೌಡ, ಹೆಚ್.ಸುಬ್ಬಯ್ಯ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಿ.ಬಿ.ಲಿಂಗಣ್ಣಯ್ಯ, ಪ್ರಧಾನ ವ್ಯವಸ್ಥಾಪಕರಾದ ಎ.ಎಸ್.ವಿನೋದ್ ಕುಮಾರ್ ಸೇರಿದಂತೆ ಬ್ಯಾಂಕ್ ವ್ಯವಸ್ಥಾಪಕರು, ಸಿಬ್ಬಂದಿ ವೃಂದವು ಉಪಸ್ಥಿತರಿದ್ದರು.