ಜನತಾ ನಗರ ಶಾಖೆಯಿಂದ ಕಾಯಕ ಯೋಜನೆ ಅಡಿಯಲ್ಲಿ ಜನತಾನಗರ ಹಾಗೂ ದಟ್ಟಗಳ್ಳಿಯ ಸಿರಿ, ದೃಷ್ಟಿ ಮಹಿಳಾ ಸ್ವಸಹಾಯ ಸಂಘಕ್ಕೆ ತಲಾ 10 ಲಕ್ಷ ರೂ ಸಾಲ ವಿತರಣೆ ಹಾಗೂ ಚಾಮುಂಡೇಶ್ವರಿ ಧನಲಕ್ಷ್ಮಿ ಶ್ರೀ ಬಾಲಗಂಗಾಧರ ನಾಥಸ್ವಾಮಿ ಮಹಿಳಾ ಸ್ವಸಹಾಯಕ್ಕೆ ಒಟ್ಟು 7 ಲಕ್ಷ ರೂ ಲಿಂಕೇಜ್ ಸಾಲ ವಿತರಣೆಯನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಜಿ.ಡಿ.ಹರೀಶ್ ಗೌಡ ರಿಂದ ಚೆಕ್ ವಿತರಿಸಲಾಯಿತು.ಈ ವೇಳೆ ಬ್ಯಾಂಕಿನ ನಿರ್ದೇಶಕರಾದ ಎಂ ಪಿ ಸುನಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ ಸಿ ಜನಾರ್ದನ್ , ಜಿ. ಎಂ ಶಶಿಧರ್ ಎಂ.ಟಿ., ಶಾಖಾ ವ್ಯವಸ್ಥಾಪಕರು ರಮೇಶ್, ಮೇಲ್ಚಿಚಾರಕರು ಸತೀಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.