2019-20 ನೇ ಸಾಲಿನ ವಾರ್ಷಿಕ ಮಹಾಸಭೆ

ಇಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ವತಿಯಿಂದ ಹಮ್ಮಿಕೊಂಡ '2019-20 ನೇ ಸಾಲಿನ ವಾರ್ಷಿಕ ಮಹಾಸಭೆ'ಯು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿ ಡಿ ಹರೀಶ್ ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಗ್ರಾಹಕರ ಅನುಕೂಲಕ್ಕಾಗಿ ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ನೂತನ ಭಾರತ್ ಬಿಲ್ ಪೇ ಆಪ್ ಅನಾವರಣ

ಗ್ರಾಹಕರು ತಮ್ಮ ಮೊಬೈಲ್ ನಿಂದಲೇ ಕರೆಂಟ್ ಬಿಲ್, ವಾಟರ್ ಬಿಲ್ ಇತ್ಯಾದಿಗಳನ್ನು ಎಂಸಿಡಿಸಿಸಿ ಬ್ಯಾಂಕ್ ಭಾರತ್ ಬಿಲ್ ಪೇ ಆಪ್ ಮೂಲಕ ಕಟ್ಟಬಹುದು.ಭಾರತ ಬಿಲ್ ಪೇ ಮೂಲಕ ಹಣವನ್ನು ಎಲ್ಲಿ ಬೇಕಾದರೂ ಬಳಸಬಹುದು. ಎಲ್ಲಾ ವಹಿವಾಟಿನ ದಾಖಲಾತಿಗಳನ್ನು ಪಡೆದುಕೊಳ್ಳಬಹುದು.ಯಾವುದೇ ಖಾತೆಗೆ 24×7 ಹಣ ವರ್ಗಾವಣೆ ಮಾಡಬಹುದು.ಆನ್‌ಲೈನ್ ವಹಿವಾಟು ನಿಮಗೆ ಭದ್ರತೆಯನ್ನು ನೀಡುತ್ತದೆ.ಆನ್‌ಲೈನ್ ವಹಿವಾಟು ನಿಮ್ಮ ಸಮಯವನ್ನು ಉಳಿಸುತ್ತದೆ. ಬಾಕಿ ಬಿಲ್ ಪಾವತಿಗಳ ಬಗ್ಗೆ ತಿಳಿಸಿ ನಿಮ್ಮ ಬಿಲ್ ಅನ್ನು ಸರಿಯಾದ ಸಮಯಕ್ಕೆ [...]

ಬಂಡಿಪಾಳ್ಯ ಶಾಖೆಗೆ ಬ್ಯಾಂಕಿನ ಅಧ್ಯಕ್ಷರ ಭೇಟಿ

ಇಂದು ಬಂಡಿಪಾಳ್ಯ ಶಾಖೆಗೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಿಡಿ ಹರೀಶ್ ರವರು ಭೇಟಿ ನೀಡಿ ಬ್ಯಾಂಕ್ ನ ಸಿಬ್ಬಂದಿಗಳೊಂದಿಗೆ ಮಾತನಾಡಿ ಬ್ಯಾಂಕಿನ ಸ್ಥಿತಿಗತಿಗಳನ್ನು ವಿಚಾರಿಸಿದರು.

ಮೈಸೂರು ಮತ್ತು ಚಾಮರಾಜನಗರ ಡಿಸಿಸಿ ಬ್ಯಾಂಕ್ ಜನರಲ್ ಬಾಡಿ ಮೀಟಿಂಗ್

ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಮೈಸೂರು ಮತ್ತು ಚಾಮರಾಜನಗರ ಡಿಸಿಸಿ ಬ್ಯಾಂಕ್ ಜನರಲ್ ಬಾಡಿ ಮೀಟಿಂಗ್. ದಿನಾಂಕ: ಡಿಸೆಂಬರ್ 23-12-2020 ರಂದು ಸಮಯ ಬೆಳಗ್ಗೆ11:00ಗಂಟೆಗೆ ಲಿಂಕ್ ಅಡ್ರೆಸ್: https://zoom.us/j/94176204151?pwd=dFhsUDI2bHMxM2pyUkFkT0I5dTVwUT09 ಮೀಟಿಂಗ್ ಐಡಿ: 941 7620 4151 ಪಾಸ್ಕೋಡ್: 063387 ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ಜೂಮ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. Mysore and Chamarajnagar DCC Bank General Body Meeting through Virtual Platform Date: Dec 23, 2020 […]

ನೂತನ ಶಾಖೆ ಇಂದಿನಿಂದ ದೊಡ್ಡ ಕವಲಂದೂರಿನಲ್ಲಿ ಕಾರ್ಯಾರಂಭ

ನಮ್ಮ ಬ್ಯಾಂಕಿನ ನೂತನ ಶಾಖೆ ಇಂದಿನಿಂದ ದೊಡ್ಡ ಕವಲಂದೂರಿನಲ್ಲಿ ಕಾರ್ಯಾರಂಭಗೊಂಡಿದೆ.

“ಆರ್ಥಿಕ ಸ್ಪಂದನ” ಕಾರ್ಯಕ್ರಮ

ಮೈಸೂರು ಕಲಾಮಂದಿರದಲ್ಲಿ ಇಂದು ಕರ್ನಾಟಕ ಸರಕಾರ ಹಾಗೂ ಸಹಕಾರ ಇಲಾಖೆಯ ಸಹಯೋಗದೊಂದಿಗೆ Covid-19ರ ಸಂಕಷ್ಟದ ಸಮಯದಲ್ಲಿ “ಆರ್ಥಿಕ ಸ್ಪಂದನ” ಕಾರ್ಯಕ್ರಮವನ್ನುಸಹಕಾರ ಸಚಿವರು, ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್.ಟಿ ಸೋಮಶೇಖರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಕಾರ ಕ್ಷೇತ್ರದ ವಿವಿಧ ಯೋಜನೆಗಳಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರ ವ್ಯಾಪ್ತಿಗೆ ಬರುವ 8 ಜಿಲ್ಲೆಗಳ ರೈತರು,ಉದ್ದಿಮೆದಾರರು ಹಾಗೂ ಹಲವು ವಿಭಾಗಗಳಲ್ಲಿ ಸಾಲ ನೀಡಲಾಗುತ್ತಿದ್ದು ಇದಕ್ಕೋಸ್ಕರ 8600ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ವೇಳೆ ಚಾಮರಾಜನಗರ […]

ಆರ್ಥಿಕ ಸ್ಪಂದನ

COVID-19ರ ಸಂಕಷ್ಟದ ಸಮಯದಲ್ಲಿ "ಆರ್ಥಿಕ ಸ್ಪಂದನ " ಸಹಕಾರ ಕ್ಷೇತ್ರದ ವಿವಿಧ ಯೋಜನೆಗಳಡಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ದಿನಾಂಕ : 02-10-2020 ಸಮಯ : 10:00 ಗಂಟೆಗೆ ಸ್ಥಳ : ಕಲಾ ಮಂದಿರ , ಹುಣಸೂರು ರಸ್ತೆ, ಮೈಸೂರು      

PACCS ಕೇರ್ಗಳ್ಳಿ ಕಟ್ಟಡ ನವೀಕರಣ ಕಾರ್ಯಕ್ರಮ ಹಾಗೂ ಹೊಸ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ

ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ ಬ್ಯಾಂಕ್ ನಿ. ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (PACCS) ಕೇರ್ಗಳ್ಳಿ, ಮೈಸೂರು ವತಿಯಿಂದ ಇಂದು ಕೇರ್ಗಳ್ಳಿಯಲ್ಲಿ “ಕಟ್ಟಡ ನವೀಕರಣ ಕಾರ್ಯಕ್ರಮ” ವನ್ನು ಎಂ. ಸಿ.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಿ.ಡಿ ಹರೀಶ್ ರವರು ಉದ್ಘಾಟಿಸಿದರು. ಇದೇ ವೇಳೆ 2020 -21 ನೇ ಸಾಲಿನ ಹೊಸ ರೈತ ಫಲಾನುಭವಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲದ ಚೆಕ್ಕನ್ನು ವಿತರಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹಾಗೂ ಹೊಸ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ವಿತರಣೆ

ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ ಬ್ಯಾಂಕ್ ನಿ., ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸಂಘ ನಿ. ಮತ್ತು ಸಹಕಾರ ಇಲಾಖೆ ವತಿಯಿಂದ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ “ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಚೆಕ್ ವಿತರಣೆ, ಹೊಸ ರೈತ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ವಿತರಣಾ ಹಾಗೂ ಕಾರ್ಯಕ್ರಮ”ವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್ ಟಿ ಸೋಮಶೇಖರ, ಮೈಸೂರು ಕೊಡಗು ಸಂಸದರಾದ […]

ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವ

ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಅಧ್ಯಕ್ಷರಾದ ಶ್ರೀ ಜಿ.ಡಿ ಹರೀಶ್ ಗೌಡರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.